ಸಿನಿಮಾರಂಗದಲ್ಲಿ ಈಗ ಬಾರಿ ಬೇಡಿಕೆಯಿರುವ ನಟಿ ಶ್ರುತಿ ಹರಿಹರನ್ | Filmibeat Kannada

2017-12-08 1

Kannada Actress Sruthi Hariharan is in demand now. Sruthi is been very busy nowadays with her cinemas. Watch video to know about Sruthi's upcoming movie list in Kannada, Tamil & Telugu.

ಕನ್ನಡದಲ್ಲಿ ನಾಯಕಿಯರು ಕಮ್ಮಿ, ಅವಕಾಶ ಸಿಕ್ಕರು ಬಳಸಿಕೊಳ್ಳುವವರು ಕಮ್ಮಿ ಎಂಬ ಮಾತಿದೆ. ಆದ್ರೆ, ಈ ಮಾತು ನಟಿ ಶ್ರುತಿ ಹರಿಹರನ್ ಅವರಿಗೆ ಸಂಬಂಧಪಡಲ್ಲ. ಯಾಕಂದ್ರೆ, ಈಕೆಯ ಪ್ರತಿಭೆಗೆ ಅದೃಷ್ಟ ಎಂಬುವುದು ಅಂಟಿಕೊಂಡು ಬರ್ತಿದೆ. ಸ್ಟಾರ್ ನಾಯಕರಿಗೂ ಶ್ರುತಿ ನಾಯಕಿ ಆಗ್ಬೇಕು. ಹೊಸಬರ ಚಿತ್ರಕ್ಕೂ ಶ್ರುತಿ ಅವರ ಅಭಿನಯ ಬೇಕು. ಇನ್ನು ಪ್ರಯೋಗಾತ್ಮಕ ಪಾತ್ರಗಳಿಗಂತೂ ಶ್ರುತಿ ಹೆಸರು ಮುಂಚೂಣಿಯಲ್ಲಿರುತ್ತೆ. ಇದರ ಪ್ರತಿಫಲ ಈಗ ಶ್ರುತಿ ಹರಿಹರನ್ ಸಿಕ್ಕಾಪಟ್ಟೆ ಬಿಜಿ. ಇವರ ಕೈಯಲ್ಲಿರುವ ಸಿನಿಮಾಗಳ ಸಂಖ್ಯೆ ನೋಡಿದ್ರೆ ಒಂದು ಕ್ಷಣ ಆಶ್ಚರ್ಯವಾಗುವುದಂತು ಗ್ಯಾರೆಂಟಿ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ, ತಮಿಳು, ತೆಲುಗು ಸಿನಿಮಾರಂಗದಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಹಾಗಿದ್ರೆ, ಶ್ರುತಿ ಅಭಿನಯಿಸುತ್ತಿರುವ ಹೊಸ ಸಿನಿಮಾಗಳು ಯಾವುದು ಎಂದು ಮುಂದೆ ನೀಡಲಾಗಿದೆ. ಸುದೀಪ್ ಮತ್ತು ಶಿವರಾಜ್ ಕುಮಾರ್ ಅಭಿನಯದ 'ದಿ ವಿಲನ್' ಚಿತ್ರದಲ್ಲಿ ಶ್ರುತಿ ಹರಿಹರನ್ ಪ್ರಮುಖ ಪಾತ್ರವನ್ನ ನಿರ್ವಹಿಸಿದ್ದಾರೆ. ಪ್ರೇಮ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಮುಂದಿನ ವರ್ಷದ ಆರಂಭದಲ್ಲಿ ತೆರೆಕಾಣುವ ಸಾಧ್ಯತೆ ಇದೆ.

Videos similaires